Infosys co-founder Nandan Nilekani and wife Rohini will donate half of their wealth under Giving Pledge movement. Giving Pledge is a movement initiated by Microsoft founder Bill Gates and Melinda Gates. <br /> <br />ಅರ್ಧ ಆಸ್ತಿ ದಾನ ಮಾಡಲು ನಂದನ್ ನಿಲೇಕಣಿ ದಂಪತಿ ನಿರ್ಧಾರ. ತಮ್ಮ ದುಡಿಮೆಯ ಅರ್ಧ ಭಾಗ ಆಸ್ತಿಯನ್ನು ದಾನ ಮಾಡಲು ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ರೋಹಿಣಿ ನಿಲೇಕಣಿ ದಂಪತಿ ನಿರ್ಧರಿಸಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮಿಲಿಂದಾ ಗೇಟ್ಸ್ ಅವರ ಗಿವಿಂಗ್ ಪ್ಲೆಡ್ಜ್ ಅಭಿಯಾನದಡಿ ತಮ್ಮ ಆಸ್ತಿ ದಾನ ಮಾಡಲು ನಿಲೇಕಣಿ ದಂಪತಿಗಳು ನಿರ್ಧರಿಸಿದ್ದಾರೆ.ನಿಲೇಕಣಿ ದಂಪತಿಗಳು ಸುಮಾರು 11,000 ಕೋಟಿ ಆಸ್ತಿ ಹೊಂದಿದ್ದು ಇದರಲ್ಲಿ ಅರ್ಧ ಪಾಲು ಅಂದರೆ ಸುಮಾರು 5,500 ಕೋಟಿ ರೂಪಾಯಿಗಳನ್ನು ದಾನ ಮಾಡಲಿದ್ದಾರೆ.ಈಗಾಗಲೇ ವಿಪ್ರೋಂ ಅಧ್ಯಕ್ಷ ಅಜೀಂ ಪ್ರೇಮ್ ಜೀ, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಶೋಭಾ ಲಿಮಿಟೆಡ್ ಅಧ್ಯಕ್ಷ ಪಿ.ಎನ್.ಸಿ ಮೆನನ್ ಇದೇ ರೀತಿ ತಮ್ಮ ಆಸ್ತಿಯ ಅರ್ಧ ಭಾಗವನ್ನು ಲೋಕೋಪಯೋಗಿ ಕಾರ್ಯಕ್ಕೆ ವಿನಿಯೋಗಿಸಲು ತೀರ್ಮಾನಿಸಿದ್ದಾರೆ.
